ಸಿಸ್ಟರ್ ಕ್ಲೇರ್ ಎಸ್‌ಎಂಎಂಐ (ಜನನ ೧೯೩೭, ಮರಣ: ೧೧ ಫೆಬ್ರವರಿ ೨೦೧೮) ನವರು ಒರ್ವ ಕ್ರೈಸ್ತ ಸಂನ್ಯಾಸಿನಿ ಹಾಗೂ ಕಲಾವಿದೆ, ಆಕೆಯ ಕುಂಚದಿಂದ ಸುಮಾರು ೭೫೦ ವರ್ಣಚಿತ್ರಗಳು ಜೀವ ತಳೆದಿವೆ. ಭಾರತೀಯ ಕಲಾಪ್ರಕಾರದಲ್ಲಿ ಕ್ರೈಸ್ತ ಸನ್ನಿವೇಶಗಳನ್ನು ಚಿತ್ರಿಸುವ ವೈಶಿಷ್ಟ್ಯ ಆಕೆಯ ಕೃತಿಗಳಲ್ಲಿದೆ. ಹಾಗಾಗಿ, ಸಮಕಾಲೀನ ಭಾರತೀಯ ಕ್ರೈಸ್ತ ಕಲಾವಿದರ ಪೈಕಿ ಆಕೆಯ ಹೆಸರು ಎದ್ದು ಕಾಣುತ್ತದೆ. ಸಿಸ್ಟರ್ ಕ್ಲೇರ್ ನವರ ಕಲೆಯ ಕುರಿತು ಅನೇಕ ಪುಸ್ತಕಗಳು ಹೊರಬಂದಿವೆ, ಭಿತ್ತಿಚಿತ್ರಗಳು, ಬ್ಲಾಗುಗಳು, ಅಲ್ಲದೆ ಭಾರತಾದ್ಯಂತದ ಕಥೋಲಿಕ ಪುಸ್ತಕದಂಗಡಿಗಳಲ್ಲಿ ಅವರ ಸಂದರ್ಭೋಚಿತ ದೃಶ್ಯಗಳುಳ್ಳ ಕ್ರಿಸ್ಮಸ್ ಕಾರ್ಡುಗಳು ಸಿಗುತ್ತವೆ. == ಉಲ್ಲೇಖಗಳು ==